Wednesday, February 6, 2008

ಮುಂಬಯಿಯಲ್ಲಿ ಮಿಂಚಿದ ಯಕ್ಷ ಸಂಗೀತ/Yaksha Sangeetha hits at Mumbai-Shekar Ajekar

ಮುಂಬಯಿಯಲ್ಲಿ ಮಿಂಚಿದ ಯಕ್ಷ ಸಂಗೀತ
ಮುಂಬಯಿಯ ಕರ್ನಾಟಕ ಸಂಘ ಫೆಬ್ರವರಿ ೩ ರಂದು ಏರ್ಪಡಿಸಿದ್ದ ಸಾಹಿತ್ಯ-ಸಂಸ್ಕೃತಿ-ಸಂಭ್ರಮ-೨೦೦೮ ಈ ಕಾರ್ಯಕ್ರಮದಲ್ಲಿ ಯಕ್ಷ ಸಂಗೀತ ಅವಕಾಶ ಪಡೆದಿದ್ದು ಮುಂಬಯಿಯ ಸಂಗೀತಾಸಕ್ತರ ಮನ ಸೊರೆಗೊಂಡಿದೆ.
ಜಾಗತೀಕರಣ, ಖಾಸಗೀಕರಣ, ಉದಾರೀಕರಣದಿಂದ ಉಂಟಾದ ಸೃಜನಶೀಲತೆಯ ಆತಂಕಗಳಿಗೆ ಯಕ್ಷ ಸಂಗೀತ ಉತ್ತರವಾಗಬಲ್ಲುದು ಎಂದು ಖ್ಯಾತ ವಿಮರ್ಶಕ, ಲೇಖಕ ನಟರಾಜ್ ಹುಳಿಯಾರ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಪತ್ರಕರ್ತ ಶೇಖರ ಅಜೆಕಾರು ಅವರ ಪರಿಕಲ್ಪನೆ-ನಿರೂಪಣೆ-ನಿರ್ದೇಶನದಲ್ಲಿ ಯುವ ಪ್ರತಿಭಾ ವೇದಿಕೆ ತಂಡ ಸಮರ್ಪಿಸಿದ ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ-ಖ್ಯಾತ ಕವಿಗಳ ಗೀತೆಗಳನ್ನು ಯಕ್ಷಗಾನೀಯವಾಗಿ ಹಾಡಲಾಯಿತು. ಫೆ.೩ರ ಒಂದೇ ದಿನ ಮೂರು ಕಾರ್ಯಕ್ರಮಗಳನ್ನು ಮುಂಬಯಿಯ ವಿವಿದೆಡೆ ಸಾದರ ಪಡಿಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಕುಮಾರ್ ಹೆಬ್ರಿ, ಮದ್ದಳೆಯಲ್ಲಿ ಸುನೀಲ್ ಭಂಡಾರಿ ಕಡತೋಕ ಮತ್ತು ಚೆಂಡೆಯಲ್ಲಿ ಕೃಷ್ಣ ಸಂತೆಕಟ್ಟೆ ಸಹಕರಿಸಿದರು. ಒಂದೇ ಕಾರ್ಯಕ್ರಮದಲ್ಲಿ ಯಾವುದೇ ರಾಗಗಳನ್ನು ಪುನರಾವರ್ತಿಸದಂತೆ ಯಕ್ಷಗಾನ ಪ್ರದರ್ಶನದ ರಾಗ ಅನುಕ್ರಮಣಿಕೆಯಂತೆ ರಾಗ ಮಾಲಿಕೆಯನ್ನು ಸಂಯೋಜಿಸಲಾಗಿತ್ತು.ಸಾಮಗರ ಸಂಯಮಂ ತಂಡದ ತಾಳ ಮದ್ದಳೆ ತಿರುಗಾಟದ ಪ್ರಧಾನ ಭಾಗವತರಾಗಿ ಅನುಭವವುಳ್ಳ ಗಣೇಶ್ ಸಂಗೀತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಗೀತೆಯ ಮಹತ್ವಕ್ಕೆ ಹೊಂದುವಂತೆ, ಯಕ್ಷ ಸಂಗೀತಕ್ಕೆ ಒಪ್ಪುವಂತೆ ಒಂದು-ಎರಡು ಮದ್ದಳೆ ಬಾರಿಸಿ ಸುನೀಲ್ ಗಮನ ಸೆಳೆದರು. ಮುಂಬಯಿ ಕನ್ನಡಿಗರ ಸಾಧನೆ, ಕನ್ನಡ ಉಳಿಸಲು ಪಟ್ಟ ಶ್ರಮ ಸಹಿತ ವಿವರಗಳೊಂದಿಗೆ ಸರಳ, ಚುಟುಕಿನ ನಿರೂಪಣೆಯಿತ್ತು. ಆರಂಭದಿಂದ ಸಹಕರಿಸಿದ ಸಂಘಟಕರು, ಭಾಗವಹಿಸಿದ ಕಲಾವಿದರನ್ನು ಸ್ಮರಿಸಲಾಯಿತು.
ಹಾಡಿದ ಗೀತೆಗಳು.................. ತಾಳ............. ವಿವರಗಳು
ಮುಂಬಯಿಯ ತಿರುಗಾಟದ ಪ್ರಮುಖ ಪದ್ಯಗಳು
#ಎಂಚಿತ್ತಿ ಮಗನ್ ಪಡೆಯೊಳ್ ಪಾರ್ವತೀ ರಚನೆ: ಅಮೃತ ಸೋಮೇಶ್ವರ,- ಭೀಮ್‌ಫಲಾಸ್ -ಅಷ್ಟತಾಳ #ಭರತಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು, ರಚನೆ: ಕುವೆಂಪು - ಸಾರಾಮತಿ ರಾಗ - ಏಕತಾಳ
#ನಟನವಾಡಿದಳ್ ತರುಣಿ, ರಚನೆ: ಡಿ.ವಿ.ಜಿ. ಆರಭಿರಾಗ, ತಾಳ - ಆದಿ/ಕೋರೆಓ
#ನನ್ನ ಚೇತನ, ರಚನೆ: ರಾಷ್ಟ್ರಕವಿ ಕುವೆಂಪು, ರಾಗ - ಹಿಂದೋಳ ರೂಪಕ ತಾಳ
#ಕರುಣಾಳು ಬಾ ಬೆಳಕೆ, ರಚನೆ: ಬಿ.ಎಂ. ಶ್ರೀ. ಕಂಠಯ್ಯ, ರಾಗ- ಸೌರಾಷ್ಟ್ರ ತಾಳ: ಝಂಪೆ:ಬಾರೆ
#ನನ್ನ ದೀಪಿಕಾ, ರಚನೆ: ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ರಾಗ ಕಲಾವತಿ - ರೂಪಕ ತಾಳ
#ಹಾಡು ಹಳೆಯದಾದರೇನು? ರಚನೆ: ಡಾ ಜಿ.ಎಸ್.ಶಿವ ರುದ್ರಪ್ಪ, ರಾಗ: ಷಣ್ಮುಖಪ್ರಿಯ ತಾಳ - ತ್ರಿವುಡೆ
#ಪ್ರೀತಿ ಕೊಟ್ಟ ರಾಧೆಗೆ, ರಚನೆ: ಎಚ್.ಎಸ್.ವೆಂಕಟೇಶ ಮೂರ್ತಿ, ರಾಗ: ದನ್ಯಾಸಿ, ಏಕತಾಳ
#ಎದೆ ತುಂಬಿ ಹಾಡಿದೆನು, ರಚನೆ: ರಾಷ್ಟ್ರಕವಿ ಡಾಜಿ.ಎಸ್.ಶಿವರುದ್ರಪ್ಪ, ರಾಗ-ತುಜಾವಂತ್, ತಾಳ-ಝಂಪೆಯಾವ
#ಮೋಹನ ಮುರಳಿ ಕರೆಯಿತೋ, ರಚನೆ: ಗೋಪಾಲಕೃಷ್ಣ ಅಡಿಗ, ರಾಗ - ಮೋಹನ ತಾಳ ತ್ರಿವುಡೆ.
#ಬಸವಣ್ಣನ ಎರಡು ವಚನಗಳು: ಇವನಾರವ ಇವನಾರವ ಎಣ್ಣಿಸಿದಿರಯ್ಯ ಮತ್ತು ನು ದರೆ ಮುತ್ತಿನ ಹಾರದಂತಿರಬೇಕು

No comments: