Wednesday, February 6, 2008

Mumbai Yaksha Sangeetha Details/ ಮುಂಬಯಿಯಲ್ಲಿ ಮೊದಲ ಕಾರ್ಯಕ್ರಮ:concept:Shekar Ajekar

ಮುಂಬಯಿಯಲ್ಲಿ ಮೊದಲ ಕಾರ್ಯಕ್ರಮ:
ವ್ಯವಸ್ಥಾಪಕರು, ಕರ್ನಾಟಕ ಸಂಘಸ್ಥಳ : ವಿಶ್ವೇಶ್ವರಯ್ಯ ಸಭಾಗೃಹ, ಕನ್ನಡ ಸಂಘ, ಮುಂಬಯಿ
ಸಮಯ : ಬೆಳಿಗ್ಗೆ ೧೧.೫೫ರಿಂದ ೧೨.೦೫ ದಿನಾಂಕ: ೦೩-೦೨-೨೦೦೮/3-02-2008
ಗಣ್ಯರ ಉಪಸ್ಥಿತಿ : ಪುರುಷೋತ್ತಮ ಬಿಳಿಮಲೆ, ನಟರಾಜ್ ಹುಳಿಯೂರ್, ಎಸ್. ದಿವಾಕರ್, ಕೆ.ಟಿ. ವೇಣುಗೋಪಾಲ್, ಡಾ ಸುನೀತಾ ಶೆಟ್ಟಿ, ತುಳಸಿ ವೇಣುಗೋಪಾಲ್, ಎಚ್.ಬಿ.ಎಲ್.ರಾವ್, ಶ್ರೀನಿವಾಸ್ ಜೋಕಟ್ಟೆ, ಭರತ್ ಕುಮಾರ್ ಪೊಲಿಪು, ಓಂದಾಸ್ ಕಣ್ಣಂಗಾರ್ ಮತ್ತಿತರರು.
ಕಾರ್ಯಕ್ರಮ -2 ಸ್ಥಳ : ಪೇಜಾವರ ಮಠ, ಸಾಂತಾಕ್ರೂಜ್ಸ ಮಯ : ೪.೩೦ ಸಂಜೆ ೫.೩೦
ವ್ಯವಸ್ಥಾಪಕರು : ಕೆರ್ವಾಶೆ ಗ್ರಾಮಸ್ಥರ ಸಮಿತಿ, ಮುಂಬಯಿ
ಕ್ಯಾ. ಗಣೇಶ್ ಕಾರ್ಣಿಕ್ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ :
ಗಣ್ಯರ ಉಪಸ್ಥತಿ : ಹರಿದಾಸ್ ಭಟ್ಟ ಪೆರ್ಣಂಕಿಲ, ದಯಾನಾಯಕ್, ಶಿವರಾಮ ಜಿ.ಶೆಟ್ಟಿ, ಕೈರಂಗಳ ವಿಶ್ವನಾಥ ಭಟ್ಟ,
ಎಸ್.ಕೆ. ಬಂಗೇರ, ಶೇಖರ ಶೆಟ್ಟಿಗಾರ್, ಎಚ್.ಬಿ.ಎಲ್. ರಾವ್, ಶ್ರೀ ಹರಿ ಮತ್ತು ಕ್ಯಾ. ಗಣೇಶ್ ಕಾರ್ಣಿಕ್.
ಕಾರ್ಯಕ್ರಮ-3 ವ್ಯವಸ್ಥಾಪಕರು: ಕಾರಿಘರ್ ಕನ್ನಡ ಸಂಘ, ಕಾರಿಘರ್ ನ್ಯೂ ಬಾಂಬೆ
ಳ : ಕಮ್ಯೂನಿಟಿಹಾಲ್, ರೇಲ್ ವಿಹಾರ್, ಕಾರಿಘರ್ ಸಮಯ : ರಾತ್ರಿ ೯.೧೫ ರಿಂದ ೧೦.೦೫ಗಣ್ಯರ ಉಪಸ್ಥಿತಿ : ರಮೇಶ್ ಶೆಟ್ಟಿ, ಡಾ ಸಂಜೀವ ಶೆಟ್ಟಿ, ವಿ.ಕೆ. ಸುವರ್ಣ ಅನಿಲ್ ಪೆರ್ಡೂರ್, ಡಿ.ಪಿ.ಭಟ್ ಮತ್ತಿತರರುಫೆ.೩ ಮುಂಬಯಿ
ಯಕ್ಷ ಸಂಗೀತಅಭಿಪ್ರಾಯಗಳು
ನಾನು ಕಂಡು, ಅನುಭವಿಸಿ ಆನಂದಿಸಿದ ಪ್ರಥಮ ಪ್ರದರ್ಶನವಿದು; ಮೇಲಾಗಿ ಇದು ಮುಂಬಯಿಗೆ ಹೊಸತು.
ಯಕ್ಷಗಾನ ಕಲೆಯನ್ನು ಅತಿಯಾಗಿ ಮೆಚ್ಚುವ ನನ್ನಂಥ ಕನ್ನಡಿಗರಿಗೆ ಕನ್ನಡ-ತುಳು ಕವಿತೆಗಳು ಯಕ್ಷಗಾನದಾಚೆಗೆ ಒಗ್ಗಿಕೊಳ್ಳುವ, ಹಾಗೆ ಒಗ್ಗಿಸಿಕೊಳ್ಳುವ ವಿಧಾನವೇ ಪ್ರಶಂಸನೀಯವೆನಿಸಿತು. ಭಾಗವತನ ಸಿರಿಕಂಠ, ಮದ್ದಳೆಯ ಸುನಾದ, ಚೆಂಡೆಯ ಕೈಚಳಕ ಇವುಗಳ ತ್ರಿವೇಣಿ ಸಂಗಮ ಮೋಹಕವಾಗಿತ್ತು. ತುಳುನಾಡಿನ ಕಲಾವಿದರು ಇನ್ನಷ್ಟು ತುಳುಗೀತೆಯನ್ನು ಹಾಡುವಂತಾಗಬೇಕೆಂದು ನನ್ನ ಅಂತರಾಳದ ಬಯಕೆ. ರಾಗ, ತಾಳ, ಜ್ಞಾನವಿಲ್ಲದವರಿಗಾಗಿ ಪ್ರತಿ ಹಾಡಿಗೆ ಅನ್ವಯಿಸಿಕೊಂಡ ಈ ಬಗೆಯನ್ನೂ ತಿಳಿಸಿಕೊಟ್ಟರೆ ಒಂದು ಹಾಡಿನಿಂದ ಇನ್ನೊಂದು ಹಾಡಿಗೆ ದಾಟಿಸಿಕೊಳ್ಳುವ ರಾಗ ತರಂಗಗಳು ತಟ್ಟುವಂತಾಗಬಹುದು.ಶುಭ ಹಾರೈಸಿದ್ದೇನೆ.-
ಡಾ ಸುನೀತಾ ಶೆಟ್ಟಿ-ಮುಂಬಯಿ

ಭಾವಗೀತೆಗಳನ್ನು ಯಕ್ಷಗಾನ ಸಂಗೀತಕ್ಕೆ ಅಳವಡಿಸಿಕೊಂಡು ಯುವ ಪ್ರತಿಭಾ ವೇದಿಕೆ ಕರ್ನಾಟಕ ಸಂಘದ ಸಾಹಿತ್ಯ-ಸಂಸ್ಕೃತಿ ಸಂಭ್ರಮ-೨೦೦೮ ಸಮಾರಂಭದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮ ಅದ್ಭುತವಾಗಿತ್ತು. ಸಂಯೋಜಕ, ಪತ್ರಕರ್ತ ಗೆಳೆಯ ಶೇಖರ ಅಜೆಕಾರು ಮತ್ತು ಸಂಗಡಿಗರಿಗೆ ಅಭಿನಂದನೆಗಳು.-
- ಕೆ.ಜೆ. ವೇಣುಗೋಪಾಲ್, ಪತ್ರಕರ್ತರು ಮುಂಬಯಿ.

ಯಕ್ಷ ಸಂಗೀತಕ್ಕೆ ಕನ್ನಡ ಕವನಗಳನ್ನು ಅಳವಡಿಸಿರುವ ರೀತಿ ಕುತೂಹಲಕರವಾಗಿದೆ. ಈ ರೀತಿಯ ಪ್ರಯೋಗಗಳೇ ನಮ್ಮ ಆಶಾವದವನ್ನು ಹೆಚ್ಚಿಸುತ್ತವೆ. ನಿಮ್ಮ ಸೃಜನಶೀಲ ಪ್ರಯತ್ನ ಅತ್ಯಂತ ಅಭಿನಂದನಾರ್ಹವಾಗಿದೆ.- ನಟರಾಜ್ ಹುಳಿಯೂರ್, ಬೆಂಗಳೂರುಇಂದು ಶೇಖರ ಅಜೆಕಾರು ನಡೆಸಿದ ಯಕ್ಷಸಂಗೀತ ಅತ್ಯುತ್ತಮ ರೀತಿಯಲ್ಲಿ ಜರಗಿತು, ಮುಂಬಯಿಯವರಿಗೆ ಈ ಪ್ರಯೋಗ ಹೊಸತಾಗಿದ್ದರೂ - ಕೇಳಲು ಅತಿ ಮಧುರವಾಗಿಯೂ- ಅರ್ಥಪೂರ್ಣವಾಗಿಯೂ ಇತ್ತು.-
ಬಾಲ ಕೃಷ್ಣ ನಿಡ್ವಣ್ಣಾಯ,ಮುಂಬಯಿ

ಹೊಸದಾಗಿ ನೋಡುವುದು, ಬಹಳ ಉತ್ತಮವಾಗಿತ್ತು-
ಪಿ.ಕೆ. ಸಾಲಿಯಾನ್, ಮುಂಬಯಿ

ಸಂಗೀತದ ಪ್ರಯೋಗವನ್ನು ಆಸಕ್ತಿಯಿಂದ ಗಮನಿಸಿದ್ದೇನೆ. ಕನ್ನಡ ಕವಿಗಳ ರಚನೆಗಳನ್ನು ಯಕ್ಷಗಾನ ಹಾಡುಗಾರಿಕೆಯ ಮೂಲಕ ಪ್ರತೀತಗೊಳಿಸುವ ವಿಶಿಷ್ಟ ಪ್ರಯತ್ನವನ್ನು ನಾನು ಮೆಚ್ಚಿಕೊಂಡಿದ್ದೇನೆ. ತೆಂಕುತಿಟ್ಟು ಭಾಗವತಿಕೆಯಲ್ಲಿ ಇಂಥ ಪ್ರಯೋಗ ನಡೆಸಬಹುದೇ?
- ಡಾ ಪುರುಷೋತ್ತಮ ಬಿಳಿಮಳೆ., ನವದೆಹಲಿ

Concept by :Shekara Ajekar

No comments: